ಎಂಥ ಪ್ರಶ್ನೆ ಎಲ್ಲಿದೆ ಉತ್ತರ?
Yardley London- ಎಲ್ಲಾದರೂ ಕೇಳಿದ್ದೀರಾ? ಹೌದು ಅದೇ ಸೋಪ್ ! ನನ್ನ ಮಗಳಿಗೆ ಅದರಲ್ಲೇನೋ ಮೋಹ. ನಿನ್ನೆ ಭಾನುವಾರ ಆರಾಮವಾಗಿ ಬೆಳಗ್ಗಿನ ಕೆಲಸ ಮುಗಿಸಿ ಸ್ನಾನ ಮಾಡಿ ಬಾ ಎಂದಾಗ ನಂಗೆ Yardley soap ಕೊಡು ಅಂದಳು. ಅವಳಿಗೆ ಪ್ರಧ್ಹನ ಮಂತ್ರಿ ಮೋದಿ ಅಂದ್ರೆ ಅದೇನೋ ಇಷ್ಟ . ಸ್ವಚ್ಚ್ ಭಾರತ ಅಭಿಯಾನ ಪ್ರಾರಂಭವಾದಾಗ ಸಾರಕ್ಕಿ ಮಾರ್ಕೆಟ್ ಬಳಿ ಗಲೀಜು ನೋಡಿ ಮೋದಿ ಹೇಳಿದ್ರು ಯಾರು ಕೇಳೋದೇ ಇಲ್ಲ ಅಂತ ಹೇಳೋವಾಗಲೇ ನಂಗೆ ಅವಳ ಅಭಿಮಾನದ ಬಗ್ಗೆ ಗೊತ್ತಾಗಿದ್ದು. ಅದನ್ನೇ ಇಲ್ಲಿ ಪ್ರಯೋಗ ಮಾಡೋಣ ಅಂತ "ಮೋದಿ ನೋಡಿದ್ರೆ Make In India ಅಂತಾರೆ . ನೀನು ಮಾತ್ರ ವಿದೇಶಿ ಸೋಪ್ ಬೇಕು ಅಂತಿಯಲ್ಲ" ಅಂತ ಕೇಳಿದೆ. ಅವಳು ಕೇಳಿದ ಪ್ರಶ್ನೆಗೆ ನನ್ನ ಬಳಿ ಉತ್ತರವೇ ಇರಲಿಲ್ಲ. ಅಂಥ ಪ್ರಶ್ನೆ ಏನಿರಬಹುದು ಅಂದುಕೊಂಡ್ರಾ? "ಹಾಗಾದರೆ ವಿದೇಶಿ ವಸ್ತುಗಳು ನಮ್ಮಲ್ಲಿ ಯಾಕೆ ಸಿಗುತ್ತವೆ? ಅದಕ್ಕೆ ತಾನೇ ನಾವು ಉಪಯೋಗಿಸೋದು" ಏನು ಹೇಳಬೇಕೋ ಸ್ಥಿತಿ ನನ್ನದಾಗಿತ್ತು.
ಎಷ್ಟು ನಿಜ ಆಲ್ವಾ? ೧೦ ವರ್ಷದ ಮಗುವಿನ ಮನದಲ್ಲಿ ಮೂಡಿದ ಪ್ರಶ್ನೆ ದೊಡ್ಡವರಾದ ನಮಗೆ ಯಾಕೆ ಹೊಳೇಲಿಲ್ಲ? ಒಂದು ಕಾಲದಲ್ಲಿ ಅತಿವೇಗದ ಆರ್ಥಿಕ ಬೆಳವಣಿಗೆ ಎಂಬ ಕಲ್ಪನೆಯಲ್ಲಿ ಸುಮಾರು ರಾಷ್ಟ್ರಗಳು GATT ಗೆ ಸಹಿ ಹಾಕುವಾಗ , ಜಾಗತೀಕರಣದ ಕಪಿ ಮುಷ್ಟಿಯಲ್ಲಿ ನಮಗರಿಯದೆ ನಾವು ಬಂಧಿತರಾದಾಗ ,ಪಾಶ್ಚಿಮಾತ್ಯ ಸಂಸ್ಕೃತಿಯ ನೆರಳಲ್ಲಿ ಆಶ್ರಯ ಪಡೆಯಲು ಹೊರಟಾಗ ನಮಗೆ ಇದೆಲ್ಲದರ ಪರಿವೆ ಇದ್ದಿದ್ದರೆ? ಮುಕ್ತ ಮಾರುಕಟ್ಟೆ ಎಂಬ ಜಾಲದಲ್ಲಿ ಎಷ್ಟೊಂದು ರಾಷ್ಟ್ರಗಳು ತಮ್ಮತನವನ್ನು ಕಳೆದುಕೊಂಡಾಗಿದೆ. ಏನಿದ್ದರೂ ವಿದೇಶಿ ವಸ್ತುಗಳ ಅಂದ ಮಾತ್ರ ಕಣ್ಣಿಗೆ ಚಂದ. ನೀವು ಉಪಯೋಗಿಸಲ್ವಾ ಹಾಗಾದ್ರೆ ಅಂತ ಕೇಳಬಹುದು ನೀವು! ನನ್ನನ್ನೂ ಸೇರಿಸಿ ಎಲ್ಲರಿಗೂ ಅನ್ವಯ ಇದು. ಇಲ್ಲವಾದಲ್ಲಿ ನಮ್ಮ ಮನೆಯಲ್ಲಿ ಇದರ ಬಗ್ಗೆ ಮಾತು ಬರುತ್ತಿರಲಿಲ್ಲ.
ಸ್ವಾತಂತ್ರ್ಯ ಸಂಗ್ರಾಮದ ಸಂದರ್ಭದಲ್ಲೇ ಪೂಜನೀಯ ಬಾಪೂಜಿಯವರು ವಿದೇಶಿ ವಸ್ತುಗಳ ಉಪಯೋಗ ಮಾಡದಿರಲು ಹಾಗು ಸ್ವದೇಶಿ ವಸ್ತುಗಳ ಬಳಕೆ ಮಾಡಲು ಕರೆ ಕೊಟ್ಟು ಖಾದಿ ನೇಯ್ಗೆ ಯನ್ನು ತಾವೇ ತಯಾರಿಸಲು ಪ್ರಾರಂಭಿಸಿ ಈ Make in India ಗೆ ಚಾಲನೆ ನೀಡಿದ್ದರು ಆಲ್ವಾ? ಆದರೆ ಸ್ವಾತಂತ್ರ್ಯ ಪಡೆದ ಸಂಭ್ರಮದಲ್ಲಿ ಆ ಖುಷಿಯಲ್ಲಿ, ನಂತರ ನಡೆದ ರಾಜಕೀಯದಲ್ಲಿ ಭಾರತೀಯರೆಲ್ಲ ಮುಳುಗಿ ಮತ್ತೆ ಹೊರಗೆ ಬಂದಿದ್ದು ಜಾಗತೀಕರಣವೆಂಬ ಹೊಸ ರೂಪದೊಂದಿಗೆ.!
ಮುಕ್ತ ಮಾರುಕಟ್ಟೆಯಲ್ಲಿ ನಮ್ಮನ್ನೇ ನಾವು ಕಳೆದುಕೊಳ್ಳುತ್ತಿರುವಾಗ ಈ cocept ಎಷ್ಟು ಫಲಕೊಡಬಲ್ಲದು? ಗೊತ್ತಿಲ್ಲ. ನಮಗೇ ಬೇಡವಾಗಿದ್ದನ್ನು ಪೀಳಿಗೆ ಒಪ್ಪಿಕ್ಕೊಳ್ಳುವುದೇ ಕಾಡು ನೋಡಬೇಕು. ಇಲ್ಲವೆಂದಾದಲ್ಲಿ ನನ್ನ ಮಗಳು ಕೇಳಿದ ಪ್ರಶ್ನೆಯನ್ನೇ ಎಲ್ಲ ಮಕ್ಕಳು ಕೇಳಬಹುದೇನೋ ! ಕಾಲಾಯ ತಸ್ಮೈ ನಮಃ !!!