ಹುಟ್ಟು ಸಾವಿನ ನಡುವೆ ನಾಲ್ಕು ದಿನದ ಬದುಕು .... ಖುಷಿಯ ಕ್ಷಣಗಳು, ಬದುಕು ಎಷ್ಟು ಬೇಗ ಮುಗಿಯುತ್ತಲ್ಲ ಅನ್ನೋ ಭಾವವನ್ನು ಕೊಟ್ಟರೆ, ದುಃಖ ಇಡುವ ಪ್ರತಿ ಹೆಜ್ಜೆಯಲ್ಲೂ ನಡೆದಷ್ಟು ಮುಗಿಯದ ಹಾದಿಯನ್ನು ತೋರಿಸುತ್ತದೆ. ಬದುಕಲ್ಲಿ ಬರುವ ಅದೆಷ್ಟೋ ಬಂಧಗಳು ಸಂಬಂಧವಾಗಿ, ಬಂಧನವಾಗಿ ಇತಿಹಾಸದ ಪುಟ ಸೇರುತ್ತಲೇ ಇರುತ್ತದೆ. ದೂರದಿಂದ ಚಂದವಾಗಿ ಕಾಣುವ ಅದೆಷ್ಟೋ ಮನಸುಗಳು ತೀರ ಹತ್ತಿರವಾಗಿ ಮನದಾಳದಲ್ಲಿ ಮನೆ ಮಾಡಿ, ಹೃದಯದಾಳದಲ್ಲಿ ನೆಲೆಯಾಗಿ, ಮುಂದೊಂದು ದಿನ ಕಟ್ಟಿದ ಗೂಡನ್ನು ಬಿಟ್ಟು ಮತ್ತೊಂದು ಮನದಲ್ಲಿ ಮನೆ ಕಟ್ಟಲು ನಿರ್ಧಾರ ಮಾಡುತ್ತಾರೆಂದು ಅರಿವಾದ ಆ ದಿನ ! ಬದುಕೇ ಬೇಡವೆಂದು ಈ ಮನ ನಿರ್ಧರಿಸುವ ಆ ದಿನ!
ಕಾಣದ ಕಡಲಿಗೆ ಹಂಬಲಿಸುವ ಮನಸ್ಸೇ ... ಬಲವಂತವಾಗಿ ಆಗಸದಲ್ಲಿರುವ ಚಂದ್ರನನ್ನು ಎದೆಯಲ್ಲಿ ಬಚ್ಚಿಡಲು ಸಾಧ್ಯವೇ ಎಂಬುದನ್ನು ಯಾಕೆ ಅರ್ಥಮಾಡಿಕೊಳ್ಳುತ್ತಿಲ್ಲ ನೀನು? ಪ್ರೀತಿ ತಾನಾಗೆ ಹುಟ್ಟುತ್ತದೆ ಆದರೆ ಮಾನವನ ಸ್ವಾರ್ಥ , ಅಹಂ, ಅಹಂಕಾರದಿಂದ ನಾವುಗಳೇ ಅದನ್ನು ಸಾಯಿಸುತ್ತಿದ್ದೇವೆ ಎಂದು ನಿನಗನಿಸುತ್ತಿಲ್ಲವೇ .... ಬೇಕೆಂದಾಗ ಎಲ್ಲ ಬೇಕು ! ಬೇಡವೆಂದು ಬಿಸಾಕಲು ಅದೇನು ವಸ್ತುವೇ ಎಂದು ಯಾಕೆ ನೀ ಕೇಳುತ್ತಿಲ್ಲ? ನಿನ್ನಿಂದಾಗದ ಕೆಲಸ ಅದು. ಮತ್ತೆ ಪ್ರೀತಿಗೆ ನಿನ್ನ ಶರಣಾಗತಿ! ಮನಸ್ಸೇ ರಿಲಾಕ್ಸ್ ಪ್ಲೀಸ್ !
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ