ಬಾಳೆಂಬ ಕಡಲಿನಲ್ಲಿ ಜೊತೆಯಾಗಿ ನನ್ನೊಡನೆ ಹೆಜ್ಜೆ ಹಾಕುವ ಅಕ್ಷರಗಳ ಸಾಲು ಸಾಲುಗಳನ್ನು ನಿಮಗೆ ಪರಿಚಯಿಸುವ ಆಸೆ . ಮನದ ಮೂಲೆಯಲ್ಲಿ ಕಾಡುವ ಭಾವಗಳನ್ನು ಪೋಣಿಸಿ ನಿಮ್ಮ ಮುಂದೆ ಇಡುವ ತವಕ. ಎಲ್ಲ ಬಂಧಗಳ ನಡುವೆ ಬಂಧಿಯಾಗಿದ್ದರೂ ಬಂಧಿಸಲಾಗದ ಭಾವನೆಗಳನ್ನು ನಿಮ್ಮ ಜೊತೆ ಹಂಚುವ ಕಾತರ...
- ಸ್ಮಿತಾ
ಗುರುವಾರ, ಜುಲೈ 7, 2016
ಮಳೆ ಹನಿಯ ಪಿಸು ಮಾತು
ಕಣ್ಣ ಭಾಷೆಯ ಕವನ
ಅರ್ಥವಾಗದ ಜಗದ ನಿಯಮ !
ಭಾರವಾಗುವ ಹೆಜ್ಜೆ
ಮೂಕವಾಗುವ ಮನಸು
ಸೋತು ಸೊರಗುವ ಹೃದಯ !
ಮಧುವ ಹೀರಲು ಬಂದ
ಭ್ರಮರಕದು ಚಂದ
ಕೇಳುವುದೆ ಹೂವ ಸಮ್ಮತಿ?
ಪ್ರೀತಿಯಿಲ್ಲದ ಮೇಲೆ
ಕಳುಹುವರು ಯಾರು
ಭಾವಗಳ ಓಲೆ?
-ಸ್ಮಿತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ