ರಾಧೆಗಾಗಿ ಪ್ರೀತಿ ಕೊಟ್ಟೆ
ರುಕ್ಮಿಣಿಗೆ ಬದುಕು ಕೊಟ್ಟೆ
ನಿನ್ನೆದೆಯಲಿ ಯಾರನಿಟ್ಟೆ?
ಕೊಳಲ ಹಾಡು ರಾಧೆಗಾಗಿ
ಬದುಕ ಹಾಡು ಮಡದಿಗಾಗಿ
ಮನದ ಪ್ರೀತಿ ಯಾರಿಗಾಗಿ?
ಕನಸೆಲ್ಲವೂ ರಾಧೆಗೆ
ಕರ್ತವ್ಯವು ಪತ್ನಿಗೆ
ಸ್ಥಾನವೇನು ಅವಳಿಗೆ?
ನಿನ್ನ ಹೃದಯದಿ ಅವಳ ಸ್ಥಾನ
ಅವಳ ಮನದಲಿ ನಿನದೆ ಧ್ಯಾನ
ಹೇಳು ಅರ್ಥ ನೀನಿದಕೆ!
ರಾಧಾ - ನಿಷ್ಕಲ್ಮಶ ಪ್ರೀತಿಗೆ ಉದಾಹರಣೆ . ಕೃಷ್ಣನಲ್ಲಿ ಒಂದಾಗುವ ಆಸೆ ಬಿಟ್ಟರೆ ಇನ್ನೇನನ್ನು ಬಯಸದೆ ಬದುಕಿದ ರಾಧೆಗೆ ಕೃಷ್ಣ ಏನು ಕೊಟ್ಟ? ಪ್ರತಿಸಲ ರಾಧಾ ಕೃಷ್ಣನ ಫೋಟೋ ನೋಡಿದಾಗ ನನ್ನ ಮನದಲ್ಲಿ ಏಳೋ ಪ್ರಶ್ನೆ ಇದು. ಅದೇ ಈ ಕವನ !
-ಸ್ಮಿತಾ
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ